English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ಸುಳ್ಳು ಪ್ರವಾದಿಗಳು ದರ್ಪದಿಂದ "ಯೆಹೋವನು ಹೀಗೆ ನುಡಿಯುತ್ತಾನೆ" ಎನ್ನುವರು, ಎಚ್ಚರಿಕೆ
ಜೂನ್ 2012 (1) - ಝ್ಯಾಕ್ ಪೂನನ್

ಯೆರೆಮೀಯನು 23:5,6 ರಲ್ಲಿ ಪ್ರಭುವಾದ ಯೇಸು ಕ್ರಿಸ್ತನ ಬರುವಿಕೆಯ ಬಗ್ಗೆ ಯೆರೆಮೀಯನು, ‘ಸದ್ಧರ್ಮಿಯಾದ ಚಿಗುರು’ ಮತ್ತು ‘ಯೆಹೋವನೇ ನಮ್ಮ ಸದ್ಧರ್ಮ’ ಎಂದು ಪ್ರವಾದಿಸುವುದನ್ನು ನಾವು ಕಾಣುತ್ತೇವೆ.

ತನ್ನ ನೀತಿಯು ನಮಗೆ ಅನ್ವಯಿಸುವಂತೆ ಮಾಡಿ ನಮ್ಮನ್ನು ನೀತಿವಂತರನ್ನಾಗಿ ನಿರ್ಣಯಿಸುವಾತನು, ಎಂದು ಕರ್ತನನ್ನು ಈ ಬಿರುದು ಸಂಬೋಧಿಸುತ್ತದೆ. ಇದು ಹೊಸ ಒಡಂಬಡಿಕೆಯ ಬಿರುದಾಗಿದೆ - ಯೆರೆಮೀಯನು ಅನೇಕ ಬಾರಿ ಹೊಸ ಒಡಂಬಡಿಕೆಯ ಪ್ರವಾದನೆಗಳನ್ನು ನುಡಿದಿದ್ದಾನೆ.

ಈ ಅಧ್ಯಾಯವು ಬೋಧಕರೆಲ್ಲರೂ ಓದಬೇಕಾದ ಒಂದು ಅತ್ಯುತ್ತಮವಾದ ಅಧ್ಯಾಯವೂ ಸಹ ಆಗಿದೆ, ಏಕೆಂದರೆ ಇಲ್ಲಿ ಅವರು ಮನವರಿಕೆ ಮಾಡಿಕೊಳ್ಳಬೇಕಾದ ಅನೇಕ ಎಚ್ಚರಿಕೆಗಳು ನೀಡಲ್ಪಟ್ಟಿವೆ. ಇಲ್ಲಿ ಸುಳ್ಳು ಪ್ರವಾದಿಗಳನ್ನು ಬಯಲಿಗೆಳೆದು ಖಂಡಿಸಲಾಗಿದೆ. ಯೆಹೋವನ ಮಾತನ್ನು ಕಿವಿಗೊಟ್ಟು ಗಮನಿಸದೇ ಇದ್ದುದರಿಂದ ಅವರು ಸುಳ್ಳು ಪ್ರವಾದಿಗಳಾದರು (ಯೆರೆಮೀಯನು 23:18). ಅವರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ನುಡಿಯನ್ನು ಆಲಿಸಲು ಅಸಡ್ಡೆ ಮಾಡುವಂಥವರು.

ತಮ್ಮ ಸ್ವಂತಕ್ಕಾಗಿ ಗೌರವ ಮತ್ತು ಸಂಪತ್ತುಗಳನ್ನು ಅರಸುತ್ತಾ ಅಲೆಯುತ್ತಿರುವ ಅನೇಕ ಹುಸಿ ಪ್ರವಾದಿಗಳು ಇಂದು ಕ್ರೈಸ್ತಲೋಕದಲ್ಲಿ ಇರುವರು. ಅವರು ಕನಸುಗಳನ್ನು ಸೃಸ್ಟಿಸಿ, ತಾವು ಅವನ್ನು ಕನಸು ಕಂಡಿರುವುದಾಗಿ ಸುಳ್ಳಾಡುತ್ತಾ ಪ್ರವಾದಿಸುವರು.

ಅವರ ಮಾತಿಗೆ ಕಿವಿಗೊಡಬೇಡಿರಿ, ಎಂದು ಯೆರೆಮೀಯನು ಜನರನ್ನು ಎಚ್ಚರಿಸುವನು. ಅವರು ತಮ್ಮ ಸ್ವಂತ ಸಂದೇಶಗಳನ್ನು ಸೃಷ್ಟಿಸಿ, "ಯೆಹೋವನು ಹೀಗೆ ನುಡಿಯುತ್ತಾನೆ," ಎಂದು ಅವನ್ನು ಪ್ರಕಟಿಸಿದರು. ಆದರೆ ಕರ್ತನು ಅವರೊಂದಿಗೆ ಮಾತನಾಡಲಿಲ್ಲ. ಈವತ್ತೂ ಸಹ ಹೀಗೆಯೇ ಅಜಾಗರೂಕತೆಯಿಂದ ನುಡಿಯುವ ಅನೇಕರು ಇದ್ದಾರೆ. ಕರ್ತನ ನುಡಿಯು ಸ್ಪಷ್ಟವಿಲ್ಲದಿದ್ದಾಗ, “ಯೆಹೋವನು ಇಂತೆನ್ನುತ್ತಿದ್ದಾನೆ," ಎನ್ನುವದು ಬಹಳ ಅಪಾಯಕಾರಿಯಾದುದು. ಕಿಂಚಿತ್ತೂ ದೇವರ ಭಯವಿಲ್ಲದ ಜನರು ಇಂದು ಆ ಮಾತನ್ನು ನುಡಿಯುವರು ಹಾಗೂ ತಮ್ಮ ಮನಸ್ಸಿಗೆ ಹೊಳೆದದ್ದನ್ನು ಹೇಳುವರು. ಇದು ಅಪಾಯಕರ ಮತ್ತು ದುಷ್ಟತನವಾಗಿದೆ.

ಅಂತಹ ವ್ಯಕ್ತಿಗಳೆಲ್ಲಾ ಈ ಅಧ್ಯಾಯವನ್ನು ಓದಿ, ದೇವರಿಗೆ ಭಯಪಡುವುದನ್ನು ಕಲಿತುಕೊಳ್ಳುವುದು ಉಚಿತವೆಂದು ನಾನು ಹೇಳಬಯಸುತ್ತೇನೆ. ದೇವರು ನುಡಿಯುತ್ತಾರೆ, ನಿಜ. ಆದರೆ ಅವರು ಮಾತನಾಡುವುದು, "ನನಗೂ ದೇವರ ಆತ್ಮ ಉಂಟೆಂದು ನೆನಸುತ್ತೇನೆ," (1 ಕೊರಿ. 7:40) ಎಂದೆನ್ನುವ ಪೌಲನಂತಹ ದೀನ ಜನರ ಮೂಲಕ - ಮತ್ತು ಜಂಬದಿಂದ, "ಯೆಹೋವನು ಇಂತೆನ್ನುತ್ತಾನೆ" ಎಂದು ನುಡಿಯುವ ವ್ಯಕ್ತಿಗಳ ಮೂಲಕವಲ್ಲ. ಅಂತಹ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಗೊಳ್ಳಿರಿ - ಇಂದಿನ ಕ್ರಿಸ್ತ ಜಗತ್ತಿನಲ್ಲಿ ಅಂತಹ ಸಾವಿರಾರು ಜನರಿದ್ದಾರೆ.

ದೇವರು ತನ್ನ ವಾಕ್ಯವು ಬೆಂಕಿಗೂ, ಬಂಡೆಯನ್ನು ಒಡೆದು ಬಿಡುವ ಸುತ್ತಿಗೆಗೂ ಸಮನಾಗಿದೆ ಎನ್ನುವರು (ಯೆರೆಮೀಯನು 23:29). ಏಕೆ ಅನೇಕ ಬೋಧಕರ ವಾಕ್ಯವು ಜನರ ಕಠಿಣ ಹೃದಯಗಳನ್ನು ಒಡೆದು, ಅವು ಕುದಿಯುವಂತೆ ಮಾಡುವದು ಸಾಧ್ಯವಾಗಿಲ್ಲ? ಏಕೆಂದರೆ ಅವರ ನುಡಿಗಳು ಪ್ರಭುವಾದ ಕರ್ತನಿಂದ ಬಂದಿಲ್ಲ.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)