|
ಒಬದ್ಯನು ಅದ್ಯಾಯ 1 ರಲ್ಲಿ ಎದೊಮಿನ ಮೇಲೆ ದೇವರ ನ್ಯಾಯತೀರ್ಪಿನ ಬಗ್ಗೆ ಮಾತನಾಡಿದನು. ಎದೋಮ್ ನಮ್ಮ ಮಾಂಸದ ಒಂದು ಮಾದರಿಯಾಗಿದೆ. ಈ ಪ್ರವಾದನೆಯು ನಮ್ಮ ಮಾಂಸ(ದುರೀಚ್ಚೆಗಳ) ಸಂಹಾರವನ್ನು ಸೂಚಿಸುತ್ತದೆ. ಎದೋಮಿನ ಗರ್ವದ ಬಗ್ಗೆ ಇಲ್ಲಿ ಹೇಳಲ್ಪಟ್ಟಿದೆ. "ಉನ್ನತ ಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ - ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು ಅಂದುಕೊಳ್ಳುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ; ನೀನು ಹದ್ದಿನಂತೆ ಮೇಲಕ್ಕೆ ಏರಿದರೂ ಅಲ್ಲಿಂದ ನಿನ್ನನ್ನು ಇಳಿಸಿಬಿಡುವೆನು; ಇದು ಯೆಹೂವನ ನುಡಿ". (ವಚನ 3,4).
ಮಾಂಸವು (ಮನುಷ್ಯತ್ವವು) ಯಾವಾಗಲೂ ತನ್ನನ್ನೇ ಏರಿಸಲ್ಪಡಲು (ಉನ್ನತಿಗೊಳಿಸಲು) ಬಯಸುತ್ತದೆ. ಆದರೆ, ಆ ಗರ್ವವನ್ನು ಸಂಪೂರ್ಣವಾಗಿ ನಾಶ ಮಾಡಲು ದೇವರು ನಿರ್ಧರಿಸಿದ್ದಾರೆ. ಕಳ್ಳರು ರಾತ್ರಿ ಬಂದು ಕದ್ದರೆ, ಅವರು ಎಲ್ಲವನ್ನೂ ದೋಚಿ ಕೊಂಡೊಯ್ಯಲಿಕ್ಕಿಲ್ಲ. ಆದರೆ, ಇಲ್ಲಿ, ಪ್ರತಿಯೊಂದು ಮೂಲೆಯನ್ನು ಹುಡುಕಿ ಕದಿಯಲ್ಪಡುವುದು ಹಾಗೂ ಸಿಕ್ಕ ಪ್ರತಿಯೊಂದು ನಿಧಿಯು ಕೊಂಡೊಯ್ಯಲ್ಪಡುವುದು. ನಮಗೆ ಇದರ ಅರ್ಥವೇನೆಂದರೆ, ನಮ್ನಲ್ಲಿ ಮಾಂಸವೆಂದು ಕರೆಯಲ್ಪಡುವ ಪ್ರತಿಯೊಂದು ದುರೀಚ್ಚೆ, ಚಿಕ್ಕ ಮೂಲೆಯು, ಮಾಂಸದ ಪ್ರತಿಯೊಂದು ಮೋಹವು ಸಂಪೂರ್ಣವಾಗಿ ನಾಶಹೊಂದುವುದು ಹಾಗೂ ಆತ್ಮದ ಬಲದಿಂದ ಜಯಿಸಲ್ಪಡುವುದು.
ತನ್ನ ನಿಕಟ ಸಂಬಂಧಿಯಾದ ಇಸ್ರಾಯೇಲಿಗೆ ಮಾಡಿದ ಹಿಂಸೆಗಾಗಿ ಎದೋಮ್ ಶಿಕ್ಷಿಸಲ್ಪಟ್ಟಿತು. ಏಕೆಂದರೆ, ಇಸ್ರಾಯೇಲಿನ ಅತ್ಯಂತ ಅಗತ್ಯದ ಸಮಯದಲ್ಲಿ, ಅವರು ಬಂಧಿಗಳಾಗಿ ಸಾಗಿಸಲ್ಪಡುವ ಸಮಯದಲ್ಲಿ, ಅವರು "ಇಸ್ರಾಯೇಲಿನ ಅಗತ್ಯದ ಸಮಯದಲ್ಲಿ ಅವರನ್ನು ತ್ಯಜಿಸಿ ಧಾಳಿಕೋರರು ಅವರ ಸಂಪತ್ತನ್ನು ಕೊಂಡೊಯ್ಯುವಾಗ ಅವರಿಗೆ ನೆರವಾಗುವುದಕ್ಕೋಸ್ಕರ ನಿನ್ನ ಒಂದು ಬೆರಳನ್ನು ಎತ್ತುವುದಕ್ಕೂ ನಿರಾಕರಿಸಿದೆ ಹಾಗೂ ನೀನು ಬೇರೆಯಾಗಿ ನಿಂತೆ" (ವಚನ 10,11). ಅವರು ಇಸ್ರಾಯೇಲಿನ ವೈರಿಗಳಂತೆ ವರ್ತಿಸಿದರು. ಇಸ್ರಾಯೇಲ್‍ಗೆ ನೆರವಾಗಲು ಎದೋಮ್ ಏನನ್ನೂ ಮಾಡಲಿಲ್ಲ.
ಮಾಡುವ ಪಾಪಗಳು ಹಾಗೂ ಮಾಡದಿರುವ ಪಾಪಗಳೆಂದು ಇವೆ. ಅನೇಕ ಸಲ, ಪಾಪದ ಬಗ್ಗೆ ಯೋಚಿಸಿದಾಗ, ಮಾಡಿರುವ ಪಾಪಗಳ ಬಗ್ಗೆ ಮಾತ್ರ ನಾವು ಯೋಚಿಸುತ್ತೇವೆ. ಒಳ್ಳೆಯ ಸಮಾರ್ಯದವನ ಸಾಮ್ಯದಲ್ಲಿ, ಯಾಜಕ ಹಾಗೂ ಲೇವಿಯು ಯಾವುದೇ ಪಾಪವನ್ನು ಮಾಡಿಲ್ಲ. ಅವರು ಗಾಯಗೊಂಡ ಮನುಷ್ಯನಿಗೆ ಹೊಡೆಯಲಿಲ್ಲ. ಅವರ ಪಾಪವೇನಾಗಿತ್ತೆಂದರೆ, ಅಗತ್ಯದಲ್ಲಿದ್ದ ಆವನಿಗೆ ಸಹಾಯ ಮಾಡಲು ಅವರು ತಮ್ಮ ಬೆರಳನ್ನೂ ಎತ್ತಲಿಲ್ಲ. ಅಗತ್ಯದಿಂದಿರುವ ಮನುಷ್ಯನಿಗೆ ಸಹಾಯ ಮಾಡದಿರುವುದು ಪಾಪವೆಂಬುದನ್ನು ನಾವು ಅರಿತ್ತಿದ್ದೇವೆಯೋ? ಅದೇ ಮಾಡದಿರುವ ಪಾಪ. ಎದೋಮ್ ಮಾಡಬೇಕಾಗಿದ್ದುದನ್ನು ಮಾಡಲಿಲ್ಲ - ಕರ್ತನು ಅದನ್ನು ಗಂಭೀರವಾಗಿ ಪರಿಗಣಿಸಿದನು. ಎದೋಮಿನ ಎರಡನೆಯ ಪಾಪವೆಂದರೆ, ಅವರು ಇಸ್ರಯೇಲಿನ ಬಂಧನದ ಬಗ್ಗೆ ಸಂತೋಷಿಸಿದರು (ವಚನ 12 ). ನಿನಗೆ ಇಷ್ಟವೆನಿಸದ ಒಬ್ಬ ವ್ಯಕ್ತಿಗೆ ಏನಾದರೂ ಕೆಟ್ಟದ್ದಾದರೆ, ನೀನು ಆನಂದ ಪಡುವೆಯಾ? ಅದು ಪಾಪ. ಬೇರೊಬ್ಬನ ಕಷ್ಟದಲ್ಲಿ ನಾವು ಸಂತೋಷಪಡಬಾರದು. ಕೇವಲ ಅದು ಮಾತ್ರವಲ್ಲ. ಎದೋಮ್ ನಿಸ್ಸಹಾಯಕ ಇಸ್ರಯೇಲರನ್ನು ಧಾಳಿ ಮಾಡಿ, ಕೂಡುವ ದಾರಿಯಲ್ಲಿ ಅವರನ್ನು ಕಡಿದುಹಾಕಿತು (ವಚನ 14). ಅವರು ಇಸ್ರಯೇಲಿನ ವೈರಿಗಳ ಜೊತೆ ಸಹಕರಿಸಿದರು. ಅಂತಿಮವಾಗಿ ದೇವರು ಇಸ್ರಯೇಲಿನ ಪುನ:ಸ್ಥಾಪನೆಯ ಬಗ್ಗೆ ಮಾತನಾಡಿದರು. ಎಲ್ಲಾ ಪ್ರವಾದಿಗಳು ಪುನ:ಸ್ಥಾಪನೆಯ ಬಗ್ಗೆ ಮಾತನಾಡಿದರು. "ಚಿಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು" (ವಚನ 17 ). ಅದು ಪರಿಶುದ್ಧವಾಗಿರುವುದು. ಯಾಕೋಬಿನ ಮನೆತನದವರು ತಮ್ಮ ಸ್ವಾಸ್ಥ್ಯಗಳನ್ನು ಸ್ವತಂತ್ರಿಸಿಕೊಳ್ಳುವರು. ಆಗ, ಯಾಕೋಬಿನ ಮನೆತನದವರು ಬೆಂಕಿಯಾಗಿಯೂ, ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು ಹಾಗೂ ಎಸಾವನ (ಎದೊಮಿನ) ಮನೆತನದವರು ಕೊಳೆಯಾಗುವರು. "ಚಿಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವುದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನಾದಾಗುವುದು" (ವಚನ 21 ). ಹಿನ್ನಡೆದ ದೇವರ ಜನರಿಗೆ "ಇಗೋ ನಿಮ್ಮ ರಾಜ/ಅರಸ" ಎಂದು ಸಾರುವುದಕ್ಕಾಗಿ ಹಾಗೂ ಅವರನ್ನು ಕರ್ತನೆಡೆಗೆ ಕರೆಯುವುದಕ್ಕಾಗಿ ಇಂದು ಅಂಥಹ ರಕ್ಷಕರಾಗಲು ದೇವರು ನಮ್ಮನ್ನು ಕರೆದಿದ್ದಾರೆ.
ಎದೋಮಿನ ಬೀಳುವಿಕೆಯ ಕಾರಣವೇನು? "ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ" (ವಚನ 3 ). ನಾವು ಗರ್ವದಿಂದ ತುಂಬಿದಾಗ, ಆತ್ಮಿಕ ವಂಚನೆಗೆ ನಾವು ನಮ್ಮನ್ನೇ ತೆರೆಯುತ್ತೇವೆ - ಯಾಕೆಂದರೆ, ಗರ್ವವು ವಂಚಕನಾಗಿರುವ ಸೈತಾನನ ಸ್ವಭಾವ. ನೀನು ನಿನ್ನ ಸೌಂದರ್ಯ, ಬುದ್ಧಿವಂತಿಕೆ, ಆತ್ಮಿಕತನ, ಬೈಬಲ್-ಜ್ಞಾನ ಅಥವಾ ಇನ್ನಾವುದೇ ವಿಷಯದ ಬಗ್ಗೆ ಗರ್ವ ಪಟ್ಟಾಗ ತಕ್ಷಣವೇ, ಸೈತಾನನು ನಿನ್ನ ಕೈ ಹಿಡಿದು ಈ ರೀತಿ ಹೇಳುತ್ತಾನೆ. "ನೀನು ಮತ್ತು ನಾನು ಈಗ ಅನ್ಯೋನ್ಯತೆಯಲ್ಲಿದ್ದೇವೆ". ಯೇಸು ಕ್ರಿಸ್ತನು ಭೂಮಿಯ ಮೇಲೆ ನಡೆದ ಅತ್ಯಂತ ದೀನನಾದ ಮನುಷ್ಯನಾಗಿದ್ದನು ಹಾಗೂ ನೀನು ದೀನನಾಗುವ ಕ್ಷಣದಲ್ಲೇ ಯೇಸುವಿನೊಡನೆ ಅನ್ಯೋನ್ಯತೆಯನ್ನು ಹೊಂದುವಿ.
ಅಹಂಕಾರವು ವ್ಯಭಿಚಾರಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ, ವ್ಯಭಿಚಾರವು ಬಾಹ್ಯ ಪಾಪ. ಬಾಹ್ಯ ಹಾಗೂ ಸ್ಪಷ್ಟವಾಗಿರುವ ಪಾಪಗಳು ಆಂತರಿಕ ಪಾಪಗಳಷ್ಟು ಗಂಭೀರವಾದುವುಗಳಲ್ಲ. ಅಹಂಕಾರದಿಂದ ಅಜಾಗರೂಕ(ತೃಪ್ತಿದಾಯಕ)ರಾಗಿರುವವರು ಮೋಸಹೊಂದಿದ್ದಾರೆಂದು ಒಬದ್ಯಾನು ಎಚ್ಚರಿಸುತ್ತಾನೆ. ನಮ್ಮ ಸುತ್ತಮುತ್ತಲಲ್ಲಿ ಮಾಂಸದ ಬಂಧನಕ್ಕೊಳಗಾಗಿರುವ ಬಗ್ಗೆ ಕಾಳಜಿಯಿಂದಿರುವುದನ್ನು ಮತ್ತು ಯೇಸುವು ಅವರನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸುವವರೆಂದು ಅವರಿಗೆ ಸಾರಲು ಅವನ ಸಣ್ಣ ಎಚ್ಚರಿಕೆಯಿಂದ ಕಲಿಯೋಣ
|