English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ನೋಹನು ದೇವರ ಜೊತೆ ನಡೆದನು
ಫೆಬ್ರುವರಿ 2012 (1) - ಝ್ಯಾಕ್ ಪೂನನ್

ಹನೊಕ ಮತ್ತು ನೋಹರು ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟ ಮೊದಲ ಇಬ್ಬರು ಬೋಧಕರು ಹಾಗೂ ಅವರಿಬ್ಬರೂ ದೇವರ ಜೊತೆ ನಡೆದರು. ಅಂದಿನಿಂದ ಪ್ರತಿಯೊಬ್ಬ ಬೋಧಕನೂ ಅದೇ ರೀತಿ ಮಾಡಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ?

ದೇವರು ನೋಹನಿಗೆ ನಾವೆಯನ್ನು ಕಟ್ಟಲು ಹೇಳಿದಾಗ ಅವನು ಕೂಡಲೇ ಅದನ್ನು ಕಟ್ಟಲಾರಂಭಿಸಿದನು. ಅದರ ವೆಚ್ಚವನ್ನು ಯಾರು ಭರಿಸುತ್ತಾರೆಂಬುದನ್ನು (ಅದಕ್ಕಾಗುವ ಖರ್ಚನ್ನು ಯಾರು ಕೊಡುತ್ತಾರೆಂಬುದನ್ನು) ನೋಹನು ದೇವರಲ್ಲಿ ಕೇಳಲಿಲ್ಲ. ಅವನು ಅದನ್ನು ದೇವರಲ್ಲಿ ಕೇಳಿದ್ದರೆ, ನೀನೇ ಅದನ್ನು ಕೊಡಬೇಕು(ಭರಿಸಬೇಕು) ಎಂದು ದೇವರು ಅವನಿಗೆ ಹೇಳುತ್ತಿದ್ದರು.

ದೇವರ ಕೆಲಸಕ್ಕಾಗಿ ನೀನೇ ನಿನ್ನ ಸ್ವಂತ ಹಣವನ್ನು ವ್ಯಯಿಸಬೇಕೆಂದು ದೇವರು ಹೇಳುವುದನ್ನು ನೀನು ಎಂದಾದರೂ ಕೇಳಿಸಿಕೊಂಡಿದ್ದೀಯ? ದೇವರ ಕೆಲಸದ ಖರ್ಚನ್ನು ಇತರರು ಕೊಡಬೇಕೆಂದು ಕ್ರಿಸ್ತೀಯ ಕೆಲಸ ಮಾಡುವ ಅನೇಕರು ಭಾವಿಸುತ್ತಾರೆ! ಆದರೆ ನೋಹನು ಆ ರೀತಿ ಭಾವಿಸಲಿಲ್ಲ. ಅವನು ತನ್ನನ್ನು, ತನ್ನ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ದೇವರ ಕೆಲಸವನ್ನೂ ಮಾಡಿದನು. ನಾವೆಯನ್ನು ಕಟ್ಟಲು ಅಗತ್ಯವಿರುವ ಹಣಕ್ಕಾಗಿ ಅವನು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಯಿತು. ಆದರೆ ಅವನು ಅದನ್ನು ಸಂತೋಷದಿಂದ ಮಾಡಿದನು. ಯೇಸು ಹೇಳಿದಂತೆ, ಕಡೆಯ ದಿನಗಳು ನೋಹನ ಕಾಲದಂತೆ ಕೆಟ್ಟದಾಗಿರುವುವು ಎಂದಾದಲ್ಲಿ, ಅಂತಿಮ ದಿನಗಳಲ್ಲಿ ದೇವರಿಗೆ ಅನೇಕ ನೋಹರು ಹಾಗು ಅಪೋಸ್ತಲ ಪೌಲನಂತೆ ತಮ್ಮನ್ನು ತಾವು ನೋಡಿಕೊಂಡು, ದೇವರ ಸೇವೆ ಮಾಡುವ ಪುರುಷರ ಅಗತ್ಯವಿದೆ.

ಪ್ರಾಣಿಗಳು ನಾವೆಯೊಳಗೆ ಹೇಗೆ ಬರುತ್ತವೆ ಎಂಬುದನ್ನು ಜನರು ನೋಹನಿಗೆ ಕೇಳಿದ್ದಿರಬಹುದು. ಅದು ತನ್ನ ಕೆಲಸವಲ್ಲ, ದೇವರದ್ದು ಎಂಬುದನ್ನು ನೋಹನು ತಿಳಿದಿದ್ದನು. ದೇವರು ಅದ್ಭುತಕರವಾಗಿ ಪ್ರಾಣಿಗಳನ್ನು ನಾವೆಯೊಳಗೆ ತಂದನು. ನೋಹನು ತಾನು ಏನು ಮಾಡಬೇಕಿತ್ತೋ ಅದನ್ನು ಮಾತ್ರ ಮಾಡಿದನು. ಅದೇನೆಂದರೆ, ನಾವೆಯನ್ನು ಕಟ್ಟುವುದು. ಬೇರೆ ಎಲ್ಲಾ ವಿಷಯಗಳನ್ನು ಅವನು ದೇವರಿಗೆ ಬಿಟ್ಟನು. ನಾವೂ ಸಹ ದೇವರು ನಮಗೆ ಹೇಳಿದ್ದನ್ನು ಮಾತ್ರ ಮಾಡಬೇಕು. ಎಲ್ಲಾ ಅಸಾಧ್ಯವಾದ ಎಲ್ಲವನ್ನೂ ನಾವು ದೇವರಿಗೆ ಬಿಟ್ಟು ಬಿಡಬೇಕು.

ಆಂತಿಮವಾಗಿ ದೇವರು ಬಾಗಿಲನ್ನು ಮುಚ್ಚಿದರೆಂಬುದನ್ನು ನಾವು ಓದುತ್ತೇವೆ (ಆದಿ. 7:16). ನಾವೆಯ ಬಾಗಿಲನ್ನು ಮುಚ್ಚಿದ್ದು ದೇವರು, ನೋಹನಲ್ಲ. ದೇವರ ಸಾಮ್ರಾಜ್ಯಕ್ಕೆ ಪ್ರವೇಶಿಸುವ ಸಮಯ ಬಂದಾಗ, ದೇವರು ರಕ್ಷಣೆಯ ಬಾಗಿಲನ್ನು ಒಂದು ದಿನ ಮುಚ್ಚುವರು.

ನಾವೆಯು ಕ್ರಿಸ್ತನ ಮತ್ತು ಅವನ ಶರೀರವಾದ - ಸಭೆಯ ಒಂದು ಚಿತ್ರ. ನಾವೆಯೊಳಗೆ ಜೀವಿಸಲು ಅನಾನುಕೂಲವಾಗಿದ್ದಿರಬೇಕು. ಸಭೆಯಲ್ಲಿ ಜೀವಿಸುವುದೂ ಅದೇ ರೀತಿಯಾಗಿರಬಹುದು. ಸಭೆಯಲ್ಲಿ ನಮಗಿಂತ ಭಿನ್ನವಾಗಿರುವ ಇತರರ ಜೊತೆ ನಾವು ಕೂಡಿಕೊಳ್ಳಬೇಕು. ಕೆಲವು ಸಲ ಅವರು ನಮ್ಮೊಂದಿಗೆ ಸರಿಯಾಗಿ ಹೊಂದಿಕೊಳ್ಳದಿರಬಹುದು. ನಾವೆಯು ಆ ಕಾಲದಲ್ಲಿ ಅನಾನುಕೂಲವಾದ ಜಾಗವಾಗಿದ್ದರೂ, ಅದು ಆ ಕಾಲದಲ್ಲಿ ಭೂಮಿಯ ಮೇಲಿನ ಸುರಕ್ಷಿತವಾದ ಸ್ಥಳವಾಗಿತ್ತು. ಅಂತೆಯೇ ಸಭೆಯಾಗಿದೆ. ಸಭೆಯಲ್ಲಿ ಕಷ್ಟಕರವಾದ ಜನರಿದ್ದರೂ, ಸಭೆಯಲ್ಲಿರಲು ನಾನು ಸಂತೋಷಪಡುತ್ತೇನೆ. ನೀವು ಸಂತೋಷಪಡುತ್ತೀರೆಂದು ನಾನು ಭಾವಿಸುತ್ತೇನೆ. ಅದಕ್ಕಾಗಿ, ನಮ್ಮನು ಕೂಡಿಕೊಳ್ಳಲು ನಾವು ಇತರರನ್ನು ಆಮಂತ್ರಿಸುತ್ತೇವೆ.

ಜಲಪ್ರಳಯವು ಕೊನೆಗೆ ನಿಂತ ಮೇಲೆ, ನೋಹನು ಒಂದು ಕಾಗೆ ಹಾಗು ಪಾರಿವಾಳವನ್ನು ನಾವೆಯಿಂದ ಹೊರಗೆ ಕಳುಹಿಸಿದನು . ಇವು ಮಾಂಸ (ಶರೀರ) ಮತ್ತು ಆತ್ಮಗಳ ಚಿತ್ರಣಗಳಾಗಿವೆ. ಕಾಗೆ ನಾವೆಗೆ ಹಿಂತಿರುಗಲೇ ಇಲ್ಲ. ಕಾಗೆಯು ಸತ್ತ ಜನರ ಮತ್ತು ಪ್ರಾಣಿಗಳ ಮಾಂಸವನ್ನು ಕಂಡಿತು ಹಾಗೂ ಆ ಔತಣದಲ್ಲಿ ಆನಂದಿಸಿತು. ಅದೇ ರೀತಿ ಶರೀರದ ಆಜ್ಞೆಗಳಾನುಸಾರ ಜೀವಿಸುವವರು ಈ ಲೋಕ ಭೋಗಿಸುವ ಸ್ಥಳವೆಂದು ತಿಳಿಯುತ್ತಾರೆ. ಆದರೆ ಪಾರಿವಾಳವು ಕೂಡಲೇ ತಿರುಗಿ ಬಂತು. ಆತ್ಮದ ಪ್ರಕಾರ ಜೀವಿಸುವವರು ಈ ರೀತಿಯಲ್ಲಿ ಇರುತ್ತಾರೆ. ಅವರು ಈ ಲೋಕದಲ್ಲಿ ಎಂದಿಗೂ ಆನಂದಪಡುವುದಿಲ್ಲ ಹಾಗೂ ಸಭೆಯಲ್ಲಿನ ದೇವರ ಜನರ ಜೊತೆಗಿನ ಅನ್ಯೋನ್ಯತೆಗಾಗಿ ಹಂಬಲಿಸುತ್ತಾರೆ.

ನೋಹನು ನಾವೆಯಿಂದ ಹೊರಬಂದ ಮೇಲೆ ಅವನು ಮೊದಲಾಗಿ ಮಾಡಿದ್ದೇನೆಂದರೆ, ದೇವರಿಗಾಗಿ ಒಂದು ಬಲಿಪೀಠವನ್ನು ಕಟ್ಟಿ ಅದರ ಮೇಲೆ ಕೃತಜ್ಞತಾ ಯಜ್ಞವನ್ನು ಅರ್ಪಿಸಿದ್ದು (ಆದಿ. 8:20). ದೇವರಿಗೆ ಎಲ್ಲಕ್ಕಿಂತ ಮೊದಲಿನ ಸ್ಥಾನ ಕೊಡುವುದು, ಮತ್ತು ಅವರಿಗೆ ನಮ್ಮ ಆರಾಧನೆ ಹಾಗೂ ಕೃತಜ್ಞತಾ ಬಲಿಯನ್ನು ಅರ್ಪಿಸುವುದರ ಉಧಾಹರಣೆಯು ನಾವೆಲ್ಲರೂ ಎಲ್ಲಾ ಕಾಲದಲ್ಲಿ ಅನುಸರಿಸಬಹುದಾದ ಒಂದು ಉತ್ತಮ ಉಧಾಹರಣೆಯಾಗಿದೆ.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)